Sunday, October 04, 2020

ಗತವೈಭವದ ಕನಸೆಂಬ ಬೆನ್ನೇರಿ

04/10/2020ರ ʻವಾರ್ತಾಭಾರತಿʼಯಲ್ಲಿ ಪ್ರಕಟವಾದ ನನ್ನ ಲೇಖನ

ನೆನಪು ಮತ್ತು ಕಲ್ಪನೆಗಳು ಎರಡೂ ವಿಭಿನ್ನ ಮಾನಸಿಕ ವ್ಯವಸ್ಥೆಗಳೆಂದು ನಂಬಲಾಗಿತ್ತು, ಆದರೆ ಅವೆರಡೂ ಒಂದೇ ಮಾನಸಿಕ ವ್ಯವಸ್ಥೆಯ ಎರಡು ವಿಭಿನ್ನ ಪ್ರಕ್ರಿಯೆಗಳೆಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಹಾಗಾಗಿ ನಮ್ಮ ಗತಕಾಲದ ನೆನಪುಗಳು ಮತ್ತು ನಮಗೆ ಅಂತಹ ಸಮಯಕ್ಕೆ ಹಿಂದಿರುಗಬೇಕೆನ್ನುವ ಚಪಲಕ್ಕೆ ನಮ್ಮ ಹಿಂದಿನ ಸ್ವಯಂ ಅನುಭವಗಳ ನೆನಪುಗಳೇ ಕಾರಣವಾಗಿರಬೇಕಿಲ್ಲ, ನಮ್ಮ ಮನಸ್ಸಿನಲ್ಲಿನ ನಾವು ಅನುಭವಿಸದ ಆದರೆ ಸ್ವತಃ ಅನುಭವಿಸಿದ್ದೇವನ್ನುವ ಭಾವನೆ ನೀಡುವ `ಆದರ್ಶಪ್ರಾಯ'ವೆನ್ನಿಸಿದ ಕಾಲ್ಪನಿಕ ಲೋಕದ ನೆನಪುಗಳೂ ಕಾರಣವಾಗಿರಬಹುದು.

 

ಇಂದು ವಿಜ್ಞಾನಿಗಳು ನಮ್ಮ ನೆನಪುಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಸವಿನೆನಪುಗಳಿರುತ್ತವೆ. ಇಂಗ್ಲಿಷಿನ ನಾಸ್ಟಾಲ್ಜಿಯಾಕ್ಕೆ ಸವಿನೆನಪು ಎನ್ನುವುದು ಸೂಕ್ತ ಪದವಲ್ಲದಿದ್ದರೂ ಅದು ಅದೇ ಅರ್ಥವನ್ನು ಸೂಚಿಸುತ್ತದೆ. ಪ್ರತಿಯೊಂದು ತಲೆಮಾರಿನವರು ಮುಂದಿನ ತಲೆಮಾರಿನವರಿಗೆ ಹೇಳುವಾಗ ತಮ್ಮ ಬಾಲ್ಯದ ಅಥವಾ ಹಿಂದಿನ ದಿನಗಳು ಎಷ್ಟು ವೈಭವವಾಗಿದ್ದಿತು, ಸಮೃದ್ಧವಾಗಿದ್ದಿತು, ಜನ ಸಂತೋಷದಿಂದ ಬದುಕುತ್ತಿದ್ದರು ಎಂದು ಹೇಳುತ್ತಿರುತ್ತಾರೆ. ನಮ್ಮದೇ ಬಾಲ್ಯದ ಶಾಲಾ ದಿನಗಳು, ಗೆಳೆಯರೊಂದಿಗೆ ಕಳೆದ ದಿನಗಳು ಅತ್ಯಂತ ಸಂತೋಷದ ದಿನಗಳೆಂದು, ಆ ದಿನಗಳು ನಮಗೆ ಮರಳಿ ಬರುವಂತಿದ್ದರೆ ಎಷ್ಟು ಚೆನ್ನಾಗಿರುತ್ತದೆಂದು ನಮಗನ್ನಿಸುತ್ತಿರುತ್ತದೆ. ಆ ದಿನಗಳು ನಮಗೆ ನಿಜವಾಗಿಯೂ ಅಷ್ಟು ಸಂತೋಷದ ದಿನಗಳಾಗಿದ್ದುವೆ? ಅಥವಾ ಅದು ನಮ್ಮ ನೆನಪುಗಳು ನಮಗೆ ಕಟ್ಟಿಕೊಡುತ್ತಿರುವ ಭ್ರಮೆಯೇ?

ಜೊಹಾನ್ಸ್ ಹೋಫರ್ ಎಂಬ ಸ್ವಿಸ್ ವೈದ್ಯ 1688ರಲ್ಲಿ `ನಾಸ್ಟಾಲ್ಜಿಯ' ಎಂಬ ಪದವನ್ನು ರೂಪಿಸಿದ. ಅದೊಂದು ವೈದ್ಯಕೀಯ ಸ್ಥಿತಿ- ಮನೆಗೆ ಮರಳಬೇಕೆನ್ನುವ ತಡೆಯಲಾರದ ಆದಮ್ಯ ಹಂಬಲ, ಚಪಲ. ಸೈನಿಕರಲ್ಲಿ ಕಂಡುಬರುವ ಸ್ವದೇಶದ ಹಂಬಲ. ಅದೊಂದು ಮಾನಸಿಕ ಕಾಯಿಲೆಯೆಂದ ವೈದ್ಯ ಹೋಫರ್. ಆ ಕಾಯಿಲೆಯ ಚಿಹ್ನೆಗಳೆಂದರೆ ಚಡಪಡಿಕೆ, ನಿದ್ರೆ ಬರದಿರುವುದು, ಆತಂಕ, ಹಸಿವಿಲ್ಲದಿರುವುದು, ಖಿನ್ನತೆಗಳು. ಜನನದ ಸಮಯದಲ್ಲಿ ತಾಯಿಯಿಂದ ಬೇರ್ಪಡುವ `ಆಘಾತಕಾರಿ' ಅನುಭವದಿಂದಲೇ ಇದು ಉಂಟಾಗುತ್ತದೆಂದರು ಫ್ರಾಯ್ಡಿಯನ್ ಮನೋವಿಶ್ಲೇಷಕರು. ಮನೆಗೆ ಹಿಂದಿರುಗಬೇಕೆನ್ನುವ ಈ ಚಪಲದಲ್ಲಿನ `ಮನೆ'ಯ ಅರ್ಥ ಕ್ರಮೇಣ ವಿಸ್ತರಿಸುತ್ತಾ ಹೋಗಿ ಅದು ಮನೆ ಅಥವಾ ಬಾಲ್ಯ ಕಳೆದ ಊರೆಂಬ ಸ್ಥಿರವಸ್ತು ಮಾತ್ರವಲ್ಲ ಅದು ಹಿಂದೆ ನಾವು ಕಳೆದಿರಬಹುದಾದ ಅಮೂರ್ತ ಅನುಭವಗಳೂ ಆಗಿರಬಹುದೆಂದರು. ಇಪ್ಪತ್ತನೆಯ ಶತಮಾನದ ಕೊನೆಗೆ ಇದನ್ನು ಮತ್ತಷ್ಟು ವಿಸ್ತರಿಸಿ ಈ ರೀತಿಯ ಮನೆಗೆ ಅಥವಾ ಗತಕ್ಕೆ ಹಿಂದಿರುಗಬೇಕೆನ್ನುವ ಚಪಲ ಮೂರು ಅಂಶಗಳನ್ನು ಒಳಗೊಂಡಿರುತ್ತದೆಂದರು. ಮೊದಲನೆಯದು ಪ್ರಜ್ಞೆಗೆ ಸಂಬಂಧಿಸಿದುದು- ನಮ್ಮ ಸ್ವಯಂಅನುಭವದ ನೆನಪುಗಳನ್ನು ಮರಳಿ ಮರಳಿ ನಮ್ಮ ಪ್ರಜ್ಞೆಗೆ ತಂದುಕೊಳ್ಳುವುದು. ಎರಡನೆಯದು ಪರಿಣಾಮಕ್ಕೆ ಸಂಬಂಧಿಸಿದುದು- ಈ ಚಪಲದ ಹಿಂದೆ ನೋವು, ಆಘಾತಗಳಿರುತ್ತವೆ, ಮನಸ್ಸಿಗೆ ಖಿನ್ನತೆ ಉಂಟುಮಾಡುವಂತದ್ದಾಗಿರುತ್ತವೆ. ಮೂರನೆಯದು ಆಸೆ ಅಥವಾ ಬಯಕೆಗೆ ಸಂಬಂಧಿಸಿದುದು- ಅಂದರೆ ನಮ್ಮ `ತಾಯ್ನಾಡಿಗೆ', ನೆನಪುಗಳಲ್ಲಿರುವ ಮನೆಗೆ ಹಿಂದಿರುಗಬೇಕೆನ್ನುವುದು.

ಈ ಕುರಿತಂತೆ ಮನೋವೈದ್ಯರು, ಮನೋವಿಶ್ಲೇಷಕರು ಹಲವರು ಅಧ್ಯಯನಗಳನ್ನು ಕೈಗೊಂಡಿದ್ದಾರೆ. ಪ್ರಜ್ಞೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಅಧ್ಯಯನಗಳಲ್ಲಿ ನಮ್ಮ ನಾಸ್ಟಾಲ್ಜಿಯ ಅಥವಾ ಸಿಹಿನೆನಪುಗಳು ನಮ್ಮ ಸ್ವಯಂಅನುಭವದ ಸ್ಮರಣೆಗಳನ್ನೇ ಹೊಂದಿರಬೇಕಿಲ್ಲ ಎನ್ನುವುದನ್ನು ಕಂಡುಕೊಂಡಿದ್ದಾರೆ. ಅಂದರೆ ಅವು ನಮ್ಮ ಬಾಲ್ಯದ ಮನೆ, ಬಾಲ್ಯದ ಗೆಳೆಯರು, ಆಹಾರ, ವಸ್ತ್ರ ಇಂಥ ಸ್ಥಳ-ವಸ್ತು ನಿರ್ದಿಷ್ಟ ಅನುಭವಗಳನ್ನೇ ಒಳಗೊಂಡಿರಬೇಕಿಲ್ಲ, ಅವು ಸ್ಥಳ-ವಸ್ತು ನಿರ್ದಿಷ್ಟವಲ್ಲದ ಪ್ರೀತಿಯ, ಗೆಳೆತನದ, ಸುಖಾನುಭವದ ಭಾವನೆಗಳ ಅನುಭವಗಳನ್ನೂ ಒಳಗೊಂಡಿರಬಹುದು. ಇದು ಬಹುಪಾಲು ಎಲ್ಲ ಸಂಸ್ಕøತಿಗಳಿಗೂ ಅನ್ವಯಿಸುತ್ತದೆ.

ಇಲ್ಲಿ ಸಂಶೋಧಕರು ಕಂಡುಕೊಂಡ ಮತ್ತೊಂದು ವಿಷಯವೆಂದರೆ ನಮ್ಮ ಗತಕಾಲದ ನೆನಪಿನಲ್ಲಿ ನಾವು ನೇರವಾಗಿ ಅನುಭವಿಸದೇ ಇರುವ `ಅನುಭವ'ಗಳೂ ಇರುತ್ತವೆ. ಅಂದರೆ ನಾವು ಜೀವಿಸಿಲ್ಲದ, ಶತಶತಮಾನಗಳ ಹಿಂದಿನ ಅವಧಿಯ ಸ್ಥಳ-ಕಾಲ ನಿರ್ದಿಷ್ಟವಲ್ಲದ ಅವಧಿಯ `ನೆನಪು'ಗಳನ್ನೂ ಒಳಗೊಂಡಿರಬಹುದು. ಅಂದರೆ, ನಮ್ಮ ಪ್ರಜ್ಞೆ ಸ್ವಯಂ ಅನುಭವಗಳಿಂದ ರಚಿತವಾಗಿರುವುದು ಮಾತ್ರವಲ್ಲ ಅದೊಂದು ಮಾನಸಿಕ ಅನುಕರಣೆ, ಬೇಕಾದರೆ ಅದೊಂದು ಕಲ್ಪನಾಲೋಕ ಎನ್ನಲೂಬಹುದು ಹಾಗೂ ಅದರಲ್ಲಿ ಘಟನಾತ್ಮಕ ಸ್ಮರಣೆ (ಎಪಿಸೋಡಿಕ್ ಮೆಮೊರಿ) ಅದರ ಭಾಗವಾಗಿರುತ್ತದೆ. ಘಟನಾತ್ಮಕ ಸ್ಮರಣೆ ಅಂದರೆ ಇಲ್ಲಿ ನಾವು ಆ ಕಾಲ-ಸ್ಥಳದಲ್ಲಿ ಬದುಕಿಲ್ಲದಿದ್ದರೂ ಆ ಅವಧಿಯಲ್ಲಿನ ಕೆಲವು ಘಟನೆಗಳಲ್ಲಿ ಸ್ವತಃ ನಾವೇ ಪಾಲ್ಗೊಂಡಂತಹ ಅನುಭವ. ನೆನಪು ಮತ್ತು ಕಲ್ಪನೆಗಳು ಎರಡೂ ವಿಭಿನ್ನ ಮಾನಸಿಕ ವ್ಯವಸ್ಥೆಗಳೆಂದು ನಂಬಲಾಗಿತ್ತು, ಆದರೆ ಅವೆರಡೂ ಒಂದೇ ಮಾನಸಿಕ ವ್ಯವಸ್ಥೆಯ ಎರಡು ವಿಭಿನ್ನ ಪ್ರಕ್ರಿಯೆಗಳೆಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಹಾಗಾಗಿ ನಮ್ಮ ಗತಕಾಲದ ನೆನಪುಗಳು ಮತ್ತು ನಮಗೆ ಅಂತಹ ಸಮಯಕ್ಕೆ ಹಿಂದಿರುಗಬೇಕೆನ್ನುವ ಚಪಲಕ್ಕೆ ನಮ್ಮ ಹಿಂದಿನ ಸ್ವಯಂ ಅನುಭವಗಳ ನೆನಪುಗಳೇ ಕಾರಣವಾಗಿರಬೇಕಿಲ್ಲ, ನಮ್ಮ ಮನಸ್ಸಿನಲ್ಲಿನ ನಾವು ಅನುಭವಿಸದ ಆದರೆ ಸ್ವತಃ ಅನುಭವಿಸಿದ್ದೇವನ್ನುವ ಭಾವನೆ ನೀಡುವ `ಆದರ್ಶಪ್ರಾಯ'ವೆನ್ನಿಸಿದ ಕಾಲ್ಪನಿಕ ಲೋಕದ ನೆನಪುಗಳೂ ಕಾರಣವಾಗಿರಬಹುದು.

ಕೆಲದಿನಗಳ ಹಿಂದೆ `ದ ಓಪನ್' ಪತ್ರಿಕೆಯಲ್ಲಿ ಬಿಬೇಕ್ ದೇಬ್ರಾಯ್‍ರವರು ಬರೆದಿರುವ ಲೇಖನದ ಶೀರ್ಷಿಕೆ `ಅಯೋಧ್ಯಾ- ಆದರ್ಶ ನಗರಕ್ಕೆ ಹಿಂದಿರುಗುವಿಕೆ' ಎಂದಿದ್ದು ಅದರಲ್ಲಿ ರಾಮರಾಜ್ಯದಲ್ಲಿ ಜನರು ಹೇಗಿದ್ದರು ಎನ್ನುವ ವರ್ಣನೆ ನೀಡಿದೆ: ರಾಜರಾಜ್ಯದಲ್ಲಿನ ಜನರು ವಿದ್ಯಾವಂತರಾಗಿದ್ದು ತಮ್ಮ ಆತ್ಮಗಳಲ್ಲಿ ಸಂತೋಷವನ್ನು ಮತ್ತು ಧರ್ಮವನ್ನು ಹೊಂದಿದವರಾಗಿದ್ದರು. ತಾವಾಗಿಯೇ ಗಳಿಸಿದ ಸಂಪತ್ತಿನಿಂದ ಅವರೆಲ್ಲರೂ ಸಂತೃಪ್ತರಾಗಿ ಜೀವಿಸುತ್ತಿದ್ದರು. ಅವರೆಲ್ಲರೂ ನಡೆ ನುಡಿಯಲ್ಲಿ ಪ್ರಾಮಾಣಿಕರಾಗಿದ್ದರು. ಆ ರಾಜ್ಯದಲ್ಲಿ ಬಡತನವೇ ಇರಲಿಲ್ಲ. ಎಲ್ಲರ ಬಳಿಯೂ ದನಕರುಗಳು, ಕುದುರೆಗಳು, ಸಂಪತ್ತು ಹಾಗೂ ಸಾಕಷ್ಟು ಆಹಾರ ಧಾನ್ಯಗಳಿದ್ದವು. ಯಾವುದೇ ಮನುಷ್ಯ ಕಾಮುಕನಾಗಿರಲಿಲ್ಲ, ಕೇಡು ಮಾಡುವವನಾಗಿರಲಿಲ್ಲ ಹಾಗೂ ಕ್ರೂರಿಯೂ ಆಗಿರಲಿಲ್ಲ. ಅಯೋಧ್ಯೆಯಲ್ಲಿ ದಡ್ಡ ಅಥವಾ ನಾಸ್ತಿಕನನ್ನು ಕಾಣುವುದು ಸಾಧ್ಯವಿರಲಿಲ್ಲ. ಎಲ್ಲ ಪುರುಷ ಮತ್ತು ಮಹಿಳೆಯರು ಅತ್ಯಂತ ತಾಳ್ಮೆಯುಳ್ಳವರಾಗಿದ್ದರು ಮತ್ತು ಧರ್ಮಕ್ಕೆ ನಿಷ್ಠರಾಗಿದ್ದರು...ರಾಮ ರಾಜ್ಯವಾಳುವವರೆಗೂ ಪ್ರಜೆಗಳಲ್ಲಿ ಮೋಸವಿರಲಿಲ್ಲ. ಅದು ತ್ರೇತಾಯುಗವಾಗಿತ್ತು ಹಾಗೂ ಕಲಿಯುಗಕ್ಕೆ ಹೋಲಿಸಿದಲ್ಲಿ ಆಗ ಧರ್ಮದ್ದೇ ಮೇಲುಗೈಯಾಗಿತ್ತು. ರಾಮ ತನ್ನ ರಾಜ್ಯವನ್ನು ಹತ್ತು ಸಾವಿರವರ್ಷಗಳ ಕಾಲ ರಾಜ್ಯವಾಳಿದ'. ಈ ವಿವರಣೆ ಇನ್ನೂ ಸುದೀರ್ಘವಾಗಿದೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ರಾಜಕಾರಣಿಗಳು `ರಾಮರಾಜ್ಯದ' ಮಾತನಾಡುತ್ತಿದ್ದಾರೆ, ಭಾರತವನ್ನು ರಾಮರಾಜ್ಯವನ್ನಾಗಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಅಮೆರಿಕದ ಅಧ್ಯಕ್ಷ ಟ್ರಂಪ್ `ಲೆಟ್ ಅಸ್ ಮೇಕ್ ಅಮೆರಿಕ ಗ್ರೇಟ್ ಎಗೇನ್' (ಮತ್ತೊಮ್ಮೆ ಅಮೆರಿಕವನ್ನು ಮಹಾನ್ ರಾಷ್ಟ್ರವನ್ನಾಗಿ ಮಾಡೋಣ) ಎನ್ನುತ್ತಿದ್ದಾರೆ. ಈಗ ಜನರಲ್ಲಿ ರಾಮರಾಜ್ಯದ ಕನಸೊಡೆಯುತ್ತಿದೆ. ರಾಮರಾಜ್ಯದ ಧರ್ಮದ, ಸಂಪತ್ತು ಸಮೃದ್ಧತೆಯ, ಸಂತೃಪ್ತ ಬದುಕನ್ನು ತಾವೇ ಹಿಂದೆಂದೋ ಅನುಭವಿಸಿದಂತೆ ಈಗ ಅದರ ಸವಿನೆನಪುಗಳು, ನಾಸ್ಟಾಲ್ಜಿಯಾ ಅವರನ್ನು ಕಾಡುತ್ತಿದ್ದು ಆ ದಿನಗಳಿಗೆ ಹಿಂದಿರುಗಬೇಕೆನ್ನುವ ತೀವ್ರ ಹಂಬಲ ಅವರನ್ನು ಕಾಡುತ್ತಿದೆ.

 2016ರಲ್ಲಿ ಪೋಲೆಂಡಿನ ಮನೋವಿಜ್ಞಾನಿಗಳಾದ ಮೋನಿಕಾ ಪ್ರುಸಿಕ್ ಮತ್ತು ಮರಿಯಾ ಲೆವಿಕಾರವರು ನಾಸ್ಟಾಲ್ಜಿಯಾ ಕುರಿತಂತೆ ಸಮೀಕ್ಷೆಯೊಂದನ್ನು ನಡೆಸಿ 25 ವರ್ಷಗಳ ಹಿಂದಿನ ಕಮ್ಯೂನಿಸ್ಟ್ ಆಡಳಿತದ ಅವಧಿಗೂ ಈಗಿನ ಸರ್ಕಾರದ ಆಡಳಿತಕ್ಕೂ ವ್ಯತ್ಯಾಸ ಕೇಳಿದಾಗ ಬಹಳಷ್ಟು ಜನ ಹಿಂದಿನ ಕಮ್ಯೂನಿಸ್ಟ್ ಆಡಳಿತದ ಅವಧಿಯಲ್ಲಿನ ಬದುಕು ಹೆಚ್ಚು ಸಂತೋಷಕರವಾಗಿ, ಸಮೃದ್ಧಿ, ಸಂತೃಪ್ತಿಯಿಂದ ಇತ್ತೆಂದು ಹೇಳಿದರು. ಇಲ್ಲಿ ಕುತೂಹಲಕರ ವಿಷಯವೆಂದರೆ ಆ ಅವಧಿಯನಂತರ ಹುಟ್ಟಿದ ಯುವಜನಾಂಗ, ತಾವು ಕಮ್ಯೂನಿಸ್ಟ್ ಅವಧಿಯ ಬದುಕನ್ನು ಅನುಭವಿಸಿರದಿದ್ದರೂ ಆ ಅವಧಿಯ ಬದುಕು ಚೆನ್ನಾಗಿತ್ತು ಎಂದಿರುವುದು ಹಾಗೂ ತಮ್ಮ ದೇಶವನ್ನು ಆ ಅವಧಿಯ ದಿನಗಳೆಡೆಗೆ ಕೊಂಡೊಯ್ಯಬೇಕು ಎಂದಿರುವುದು.

ಇಲ್ಲಿ ಮನೋವಿಜ್ಞಾನಿಗಳು ಹೇಳುವುದೇನೆಂದರೆ, ಜನರ ಸವಿನೆನಪು ಅಥವಾ ನಾಸ್ಟಾಲ್ಜಿಯಾ ಜನರು ಈ ಹಿಂದೆ ತಾವೇ ಭಾಗವಹಿಸಿದ ಘಟನೆಗಳ ಅಥವಾ ಅನುಭವಗಳ ನೆನಪುಗಳನ್ನು ಆದರಿಸಿರಬೇಕಾಗಿಲ್ಲ. ಆದರೆ ಈ ಹಿಂದೆ ಇದ್ದಿರಬಹುದಾದ ದಿನಗಳ, ಘಟನೆಗಳ ಕುರಿತ ಒಂದು ನಿರಂತರ ವ್ಯವಸ್ಥಿತ ಪ್ರಚಾರ ಜನರಲ್ಲಿ ಸೂಕ್ತ ಘಟನಾತ್ಮಕ ಸ್ಮರಣೆಗಳನ್ನು (ಎಪಿಸೋಡಿಕ್ ಮೆಮೊರಿ) ಕಲ್ಪನೆಗಳ ಮೂಲಕ ಉಂಟುಮಾಡುತ್ತದೆ. ಈ ವ್ಯವಸ್ಥಿತ ಪ್ರಚಾರದ ಕಾರ್ಯತಂತ್ರವೇನೆಂದರೆ ಜನರನ್ನು ಈಗ ಅವರು ಬದುಕುತ್ತಿರುವ ಬದುಕು ಅವರ ಕಲ್ಪನೆಯಲ್ಲಿನ ಬದುಕಿಗಿಂತ ಹೀನಾಯವಾಗಿದೆ ಎಂಬಂತೆ ಮನದಟ್ಟುಮಾಡುವುದು. ಈ ನಾಸ್ಟಾಲ್ಜಿಯಾದ ಹಿಂದಿನ ರಾಜಕೀಯದ ಉದ್ದೇಶ ಸುಖಸಂತೋಷದ ಹಿಂದಿನ ಕಲ್ಪಿತ ದಿನಗಳ ನೆನಪುಗಳನ್ನು ಹೆಚ್ಚು ವ್ಯವಸ್ಥಿತ ಪ್ರಚಾರ ಮತ್ತು ತಪ್ಪುಮಾಹಿತಿ ಒದಗಿಸುವುದರ ಮೂಲಕ ಜನರನ್ನು ನಂಬಿಸುವುದಾಗಿದೆ. ಈ ಬಲೆಗೆ ಬೀಳದಂತೆ ಪ್ರತಿರೋಧಿಸುವುದನ್ನೂ ಸಹ ಮನೋವಿಜ್ಞಾನವೇ ತಿಳಿಸಿಕೊಡುತ್ತದೆ. ನಾಸ್ಟಾಲ್ಜಿಯಾ ಎಂಬುದು ಎರಡು ಕತ್ತಿಯ ಅಲಗಿದ್ದಂತೆ ಒಂದು ಶಕ್ತಿಶಾಲಿ ರಾಜಕೀಯ ಪ್ರೇರಕ ಶಕ್ತಿಯಾಗಿದೆ- ಬದುಕನ್ನು ಉತ್ತಮಗೊಳಿಸಿಕೊಳ್ಳಬಹುದು ಅಥವಾ ವಾಸ್ತವತೆಯಿಂದ ದೂರವಿರುವ ಭ್ರಮೆಯ ಜಂಜಾಟದಲ್ಲಿ ಸಿಲುಕಿಕೊಳ್ಳಬಹುದು. ಇದರಿಂದ ತಪ್ಪಿಸಿಕೊಳ್ಳಬೇಕಾದರೆ ನಮ್ಮ ಗತಕಾಲದ ನೆನಪುಗಳ ನಿಖರತೆಯನ್ನು ಉತ್ತಮ ಮಾಹಿತಿಯೊಂದಿಗೆ ಸುಧಾರಿಸಿಕೊಳ್ಳುವುದು ಮುಖ್ಯವಾದುದು.

Thursday, March 26, 2020

ಬೊಕಾಷಿಯೋನ ರಸಿಕತೆಗಳುಇಟಲಿಯಲ್ಲಿ ಕೊರೊನಾ ವೈರಸ್ ಕನ್ನಡ ನ್ಯೂಸ್ ಚಾನೆಲ್ ಗಳು ಬೊಬ್ಬಿಡುತ್ತಿರುವಂತೆ `ಮರಣ ಮೃದಂಗ’ ಭಾರಿಸುತ್ತಿದೆ. ಹದಿನಾಲ್ಕನೇ ಶತಮಾನದಲ್ಲಿ ಇದೇ ರೀತಿ ಇಟಲಿಯನ್ನು ಪ್ಲೇಗ್ ಕಾಡಿದಾಗ `ಡೆಕಮೆರಾನ್’ ಎಂಬ ಮಹಾನ್ ಕೃತಿ ರೂಪುಗೊಂಡಿತು. ಅದರ ಕೆಲವು `ರಸಿಕತೆ’ಗಳನ್ನು 30 ವರ್ಷಗಳ ಹಿಂದೆಯೇ ನಾನು ಅನುವಾದಿಸಿದ್ದೆ. ಈಗ ಅದರ ಪಿ.ಡಿ.ಎಫ್. ಉಚಿತ ಡೌನ್ ಲೋಡ್ ಗೆ ಲಭ್ಯವಿದೆ. ಅದರ ಹಿನ್ನೆಲೆ ಓದಿ:

ನಾನು 1978-82ರ ಅವಧಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದಾಗ `ಅಂಕುರ’ ಎಂಬ ವಿದ್ಯಾರ್ಥಿ ಮಾಸಪತ್ರಿಕೆಯ ಸಂಪಾದಕನಾಗಿದ್ದೆ. ಪತ್ರಿಕೆ ಮಾರಾಟವೂ ಸಂಪಾದಕ ಮಂಡಳಿಯ ಕೆಲಸವೇ ಆಗಿದ್ದುದರಿಂದ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ (ಅವರ ಮನೆಗಳಿಗೆ), ಇತರ ಸಿಬ್ಬಂದಿಗೆ `ಅಂಕುರ’ ಮಾರಾಟ ಮಾಡುತ್ತಿದ್ದೆವು. ಇದೇ ರೀತಿ ಪತ್ರಿಕೆ ಮಾರಾಟ ಮಾಡಲು ಇಂಗ್ಲಿಷ್ ವಿಭಾಗಕ್ಕೆ ಹೋದಾಗ ನಮ್ಮ ಅಧ್ಯಾಪಕರಾಗಿದ್ದ ಎಚ್.ಎ.ರಾಮಕೃಷ್ಣ (ಅವರು ಕಮೂನ Mistaken Identity ಎಂಬ ನಾಟಕವನ್ನು `ತಪ್ಪಿದ ಎಳೆ’ ಎಂದು ಅನುವಾದಿಸಿದ್ದರು ಹಾಗೂ ಸ್ವತಃ ನಾಟಕ ಸಹ ರಚಿಸಿದ್ದರು) ಹಾಗೂ ಗ್ರಂಥಪಾಲಕರಾದ ರಾಮಚಂದ್ರರವರು ಕೂತು ಮಾತನಾಡುತ್ತಿದ್ದರು. ನನ್ನನ್ನು ಕೂಡಿಸಿಕೊಂಡು ಪತ್ರಿಕೆ, ಲಂಕೇಶ್ ಪತ್ರಿಕೆ, ಇತರ ಪುಸ್ತಕಗಳ ಬಗೆಗೆ ಮಾತನಾಡಿದರು. ಆಗ ಲಂಕೇಶ್ ಪತ್ರಿಕೆಯಲ್ಲಿ ಬರುತ್ತಿದ್ದ `ತುಂಟಾಟ’ದ `ಫೋಲಿ’ ಜೋಕುಗಳ ಬಗ್ಗೆ ಹೇಳುತ್ತಾ, ಈಗ ಲಂಕೇಶ್ ಬರೆಯುವುದೇನು, ಅಂಥವನ್ನು 14ನೇ ಶತಮಾನದಲ್ಲಿಯೇ ಬೊಕಾಷಿಯೋ ಬರೆದಿದ್ದ ಎಂದರು. ಆಗ ನನಗೆ ಬೊಕಾಷಿಯೋನ `ಡೆಕಮೆರಾನ್’ ಪರಿಚಯಿಸಿದರು. ವಿದ್ಯಾರ್ಥಿ ದಿನಗಳಲ್ಲಿ ನಾನು ಮೆಜೆಸ್ಟಿಕ್ ಗೆ ಹೋದಾಗಲೆಲ್ಲಾ ಚಿಕ್ಕಪೇಟೆಯ ಹಳೆಯ ಪುಸ್ತಕದ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದೆ. ಡೆಕಮೆರಾನ್ ಪರಿಚಯವಾದ ಕೆಲವೇ ವಾರಗಳಲ್ಲಿ ನನಗೆ ಅದರ ಪ್ರತಿಯೊಂದು ದೊರಕಿತು. ಓದಿದ ನಂತರ ನನಗೆ ಅವುಗಳಲ್ಲಿ ಕೆಲವು `ರಸಿಕತೆ’ಗಳನ್ನು ಅನುವಾದ ಮಾಡಬೇಕೆನ್ನಿಸಿ ಅನುವಾದಿಸಿದೆ ಸಹ. ಆದರೆ ಅವುಗಳನ್ನು ಯಾವ ಪತ್ರಿಕೆಯೂ ಪ್ರಕಟಿಸುವುದಿಲ್ಲವೆಂದು ಹಾಗೆಯೇ ನನ್ನ ಬಳಿ 15 ವರ್ಷಗಳು ಹಾಗೆಯೇ ಇದ್ದಿತು. ಗೌರಿ ಲಂಕೇಶರ ಬಳಿ ಮಾತನಾಡುವಾಗ  ವಿಷಯ ತಿಳಿಸಿದಾಗ ಅವರು `ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ ಹತ್ತನ್ನೆರಡು ವಾರಗಳು ಸರಣಿಯಾಗಿ ಪ್ರಕಟಿಸಿದರು. ನಂತರ 2007ರಲ್ಲಿ ಪುಸ್ತಕ ರೂಪದಲ್ಲಿಯೂ ಪ್ರಕಟವಾಯಿತು. ಈಗ ಅದನ್ನು ಪಿ.ಡಿ.ಎಫ್. ಮಾಡಿ ಎಲ್ಲರಿಗೂ ಉಚಿತವಾಗಿ ಸಿಗಲೆಂದು ಅಂತರ್ಜಾಲದಲ್ಲಿ ಗಾಳಿಗೆ ತೂರಿಬಿಟ್ಟಿದ್ದೇನೆ. ಡೌನ್ ಲೋಡ್ ಮಾಡಿಕೊಂಡು ಓದಿ. ಅದರಲ್ಲಿಯೇ ನನ್ನ ಇಮೇಲ್ ಇದೆ. ಅಭಿಪ್ರಾಯ ತಿಳಿಸಿ.
ಕತೆ ಹೇಳುವ ಮುನ್ನ........
                1348ರಲ್ಲಿ ಇಟಲಿಯ ಸುಂದರ ನಗರಗಳಲ್ಲೊಂದಾದ ಫ್ಲಾರೆನ್ಸ್ ಪ್ಲೇಗ್‍ನ ದಾಳಿಗೆ ಬಲಿಯಾಗಿತ್ತು. ಯಾವ ಗ್ರಹಗತಿಯಿಂದಾಗಿಯೋ ಅಥವಾ ದೇವರ ಕೋಪದಿಂದಾಗಿಯೋ ಏನೋ ಪೂರ್ವದಲ್ಲಿ ಪ್ರಾರಂಭವಾದ ಪ್ಲೇಗ್ ಮಾರಿ ಹುಲುಮಾನವರನ್ನು ಅವರ ಪಾಪಗಳಿಗೆ ಪ್ರತಿಫಲವಾಗಿಯೋ ಏನೋ ಎಂಬಂತೆ ಕಾಡಿತ್ತು. ಸಾವಿರಾರು ಜನ ಹುಳುಗಳ ಹಾಗೆ ಸಾಯುತ್ತಿದ್ದರು. ಊರಿಂದೂರಿಗೆ ವಿನಾಶ ಹರಡುತ್ತಾ ಪಶ್ಚಿಮದ ದಿಕ್ಕಿಗೆ ಸಾಗುತ್ತಿತ್ತು. ಆ ಭಯಂಕರ ಪ್ಲೇಗ್‍ನ ಎದುರು ಮನುಷ್ಯನ ಯಾವುದೇ ಜಾಣತನ, ಮುಂದಾಲೋಚನೆ ಕೆಲಸಕ್ಕೆ ಬರುತ್ತಿರಲಿಲ್ಲ. ವರುಷದ ವಸಂತದ ಆಗಮನದೊಂದಿಗೆ ಪ್ಲೇಗ್‍ನ ಭಯಂಕರ ಪರಿಣಾಮಗಳು ಕಾಣಿಸಿಕೊಳ್ಳತೊಡಗಿದವು. ಪೂರ್ವದಲ್ಲಿ ಮೂಗಿನಿಂದ ರಕ್ತ ಸುರಿಯುವುದು ಸಾವಿನ ನಿಶ್ಚಿತ ಸಂಕೇತವಾಗಿತ್ತು. ಆದರೆ ಇಲ್ಲಿ ಅದರ ಜೊತೆಗೆ ಕಂಕುಳು ಹಾಗೂ ತೊಡೆಗಳ ಸಂದಿಯಲ್ಲಿ ಗಂಟುಗಳು ಕಾಣಿಸಿಕೊಳ್ಳಲಾರಂಭಿಸಿದವು. ನಂತರ ಆ ತರಹದ ಗಂಟುಗಳು ದೇಹವೆಲ್ಲಾ ವ್ಯಾಪಿಸುತ್ತಿದ್ದುವು. ಮೈಮೇಲೆಲ್ಲಾ ಕಪ್ಪು ಅಥವಾ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದವು. ಆ ಚುಕ್ಕೆಗಳು ಸಾವಿನ ಆಗಮನವನ್ನು ಸಾರುತ್ತಿದ್ದವು.
                ಆ ಭಯಂಕರ ವ್ಯಾಧಿಗೆ ಕಾರಣವೇನೆಂದು ತಿಳಿಯದೆ ವೈದ್ಯರು ಕಂಗಾಲಾಗಿದ್ದರು. ಆವರ ಯಾವುದೇ ಸಲಹೆ, ಔಷಧ ಕೆಲಸ ಮಾಡುತ್ತಿರಲಿಲ್ಲ. ಪ್ಲೇಗ್ ರೋಗ ಒಬ್ಬರಿಂದೊಬ್ಬರಿಗೆ ಕಾಡ್ಗಿಚ್ಚಿನಂತೆ ಹರಡುತ್ತಿತ್ತು. ರೋಗಿಯೊಬ್ಬನ ಬಳಿ ಹೋದರೆ, ಮಾತನಾಡಿದರೆ ಆತನ ಬಟ್ಟೆ, ಇನ್ನಾವುದೇ ವಸ್ತು ಮುಟ್ಟಿದರೂ ಸಹ ರೋಗ ಹರಡುವುದು ಖಚಿತವಾಗಿತ್ತು. ಇದರಿಂದಾಗಿ ಜನರಲ್ಲಿ ಎಷ್ಟು ಹೆದರಿಕೆ ಉಂಟಾಗಿತ್ತೆಂದರೆ, ಕೊನೆಕೊನೆಗೆ ರೋಗಿಗಳನ್ನು ಅವರ ಪಾಡಿಗೆ ಬಿಟ್ಟು ತಮ್ಮ ರಕ್ಷಣೆಗಾಗಿ ಅವರಿಂದ ದೂರ ಓಡುತ್ತಿದ್ದರು.
                ಕೆಲಜನ ಈ ರೋಗಿಗಳ ಸಹವಾಸವೇ ಬೇಡವೆಂದು ತಮ್ಮದೇ ಒಂದು ಗುಂಪು ರಚಿಸಿಕೊಂಡು ಯಾವುದಾದರೂ ಮನೆಯಲ್ಲಿ ತಮ್ಮ ಆಳುಕಾಳುಗಳೊಂದಿಗೆ, ರುಚಿಶುಚಿಯಾದ ಆಹಾರ ಸೇವಿಸಿಕೊಂಡು, ಒಳ್ಳೆಯ ವೈನ್ ಚಪ್ಪರಿಸಿಕೊಂಡು, ಹೊರಗಿನ ಸಾವು ನೋವಿನ ಪ್ರಪಂಚಕ್ಕೆ ತಮ್ಮ ಮನೆಯ ಹಾಗೂ ಮನದ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡು ಸಾವು ನರಳಾಟದ ವಿಷಯಗಳನ್ನೇ ಮಾತನಾಡದಂತೆ ಸಂಗೀತ ಪ್ರಪಂಚದಲ್ಲಿ ಮುಳುಗಿರುತ್ತಿದ್ದರು. ಇನ್ನು ಕೆಲವರು ಇದಕ್ಕೆ ತದ್ವಿರುದ್ಧವಾಗಿ ಚೆನ್ನಾಗಿ ಕುಡಿದು, ಊರೆಲ್ಲಾ ಅಲೆದಾಡುತ್ತ, ಸಿಕ್ಕ ಸಿಕ್ಕ ಮನೆಗಳಿಗೆ ನುಗ್ಗಿ (ಬಹುಪಾಲು ಮನೆಗಳು ಖಾಲಿಯಾಗಿದ್ದವು) ದಾಂಧಲೆ ಎಬ್ಬಿಸುತ್ತಾ, ರೋಗಿಗಳನ್ನು ಸೋಕಿಸಿಕೊಳ್ಳದೆ ಈ ರೀತಿ ಮೋಜು ಮಾಡುವುದೇ ಪ್ಲೇಗ್ ರೋಗಕ್ಕೆ ಸರಿಯದ ಔಷಧವೆಂದು ನಂಬಿದ್ದರು.
                ಇಂಥ ಭೀಭತ್ಸ ವಾತಾವರಣದಲ್ಲಿ ನಗರದ ಕಾನೂನು ಪಾಲಕರು ನಿಯಮ, ಕಾನೂನುಗಳೆಲ್ಲಾ ಸಾವಿನ ಗಾಳಿಗೆ ತೂರಿಹೋಗಿದ್ದವು. ಎಲ್ಲರೂ ಅವರಿಗಿಷ್ಟ ಬಂದಹಾಗೆ ನಡೆದು ಕೊಳ್ಳುತ್ತಿದ್ದರು.
                ಬಹುಪಾಲು ಜನ ತಮ್ಮ ಮನೆ, ಆಸ್ತಿಪಾಸ್ತಿ ತ್ಯಜಿಸಿ, ಅಷ್ಟೇಕೆ ರೋಗದಿಂದ ನರಳುತ್ತಿರುವ ತಮ್ಮ ಸಂಬಂಧಿಕರನ್ನು, ಅಮ್ಮ ಅಪ್ಪಂದಿರನ್ನು, ಅಣ್ಣ ತಂಗಿಯರನ್ನು, ಹೆಂಡತಿ ಗಂಡಂದಿರನ್ನೂ ಬಿಟ್ಟು ಸಾವಿನಿಂದ ದೂರ ಓಡುವ ಸಲುವಾಗಿ ಫ್ಲಾರೆನ್ಸ್ ನಗರ ಬಿಟ್ಟು ಪರ ಊರುಗಳಿಗೆ ಹೋಗುತ್ತಿದ್ದರು. ಕೆಲವರಿಗೆ ಆತ್ಮೀಯ ಗೆಳೆಯರೋ ಅಥವಾ ಹಣದಾಸೆಗೆ ಇರುತ್ತಿದ್ದ ಸೇವಕರೋ ತಮ್ಮ ಸೇವೆಗೆ ಇರುವುದನ್ನು ಬಿಟ್ಟಲ್ಲಿ, ಬಹುಪಾಲು ರೋಗಿಗಳು ತಮ್ಮ ಆರೈಕೆಗೆ ಯಾರೂ ಇಲ್ಲದೆ ಸಾಯುತ್ತಿದ್ದರು.
                ಸಾವಿನ ಸಂಖ್ಯೆ ಹೆಚ್ಚಿದಂತೆಲ್ಲಾ ಶವಸಂಸ್ಕಾರದ ಆಚರಣೆಗಳೂ ಬದಲಾಗುತ್ತಿದ್ದವು. ಮೊದಲಿನಂತೆ ಶಿಸ್ತಿನ ಆಚರಣೆಗಳನ್ನು ನಡೆಸದೆ ಕಾಟಾಚಾರಕ್ಕೆ ಬೇಗ ಬೇಗ ಒಂದೆರಡು ಶಾಸ್ತ್ರಗಳನ್ನು ನಡೆಸಿ ಸಿಕ್ಕಸಿಕ್ಕ ಸ್ಮಶಾನಗಳಲ್ಲಿ ಹೂತುಬಿಡುತ್ತಿದ್ದರು. ಪಾದ್ರಿ, ಪುರೋಹಿತರಿಗಂತೂ ಬಿಡುವೇ ಇರುತ್ತಿರಲಿಲ್ಲ. ಸತ್ತವರಿಗೆ ಅಳುವವರೇ ಇರುತ್ತಿರಲಿಲ್ಲ. ಹೆಣಗಳನ್ನು ಗಾಡಿಗಳಲ್ಲಿ ಸ್ಮಶಾನಕ್ಕೆ ಸಾಗಿಸುತ್ತಿದ್ದರು. ದೊಡ್ಡ ದೊಡ್ಡ ಹಳ್ಳಗಳನ್ನು ಅಗೆದು ಹಡಗಿಗೆ ಸಾಮಾನು ತುಂಬಿಸುವಂತೆ ಶವಗಳನ್ನು ಗುಂಡಿಗೆ ತುಂಬಿ ಸಾಮೂಹಿಕ ಶವಸಂಸ್ಕಾರ ನಡೆಸಿಬಿಡುತ್ತಿದ್ದರು.
                ಮಾರ್ಚ್ ಹಾಗೂ ಜುಲೈನ ನಡುವೆ ಫ್ಲಾರೆನ್ಸ್ ನಗರವೊಂದರಲ್ಲೇ ಒಂದು ಲಕ್ಷ ಜನ ಸತ್ತಿದ್ದರು.  ಪ್ಲೇಗ್ ದಾಳಿಯಿಡುವ ಮೊದಲು ಆ ನಗರದಲ್ಲಿ ಅಷ್ಟೊಂದು ಜನರಿದ್ದಾರೆಂದು ತಿಳಿದೇ ಇರಲಿಲ್ಲ!
                ಹೋ! ಫ್ಲಾರೆನ್ಸ್ ಎಂಥ ಸುಂದರ ನಗರ! ಅದ್ಭುತ ಅರಮನೆಗಳೂ, ಸುಂದರ ಮನೆಗಳೂ- ಕೆಲದಿನಗಳ ಹಿಂದಷ್ಟೇ ರಾಜಮನೆತನದವರಿಂದ, ಶ್ರೀಮಂತ, ಕುಲೀನ ಮನೆತನದವರಿಂದ ಅವರ ಆಳುಕಾಳುಗಳಿಂದ ಗಿಜಿಗಿಜಿಗುಡುತ್ತಿದ್ದ ಆ ಮನೆಗಳು ಇಂದು ಮಸಣಗಳಾಗಿವೆ. ಬೆಳಗಿದ್ದ ಜನ ರಾತ್ರಿ ಇರುತ್ತಿರಲಿಲ್ಲ. ಇಹಲೋಕದಲ್ಲಿ ಮಧ್ಯಾಹ್ನ ಗೆಳೆಯರೊಂದಿಗೆ, ನೆಂಟರೊಂದಿಗೆ ಊಟ ಮಾಡಿದವರು ರಾತ್ರಿಯ ಊಟದ ಹೊತ್ತಿಗೆ ತಮ್ಮ ಪಿತೃಗಳೊಂದಿಗೆ ಪರಲೋಕದಲ್ಲಿರುತ್ತಿದ್ದರು!
                ಅಂತಹ ದಟ್ಟ ಸಾವಿನ ವಾಸನೆಯ ವಾತಾವರಣದಲ್ಲಿ ಒಂದು ಮಂಗಳವಾರ ಮುಂಜಾನೆ ಏಳು ಜನ ಯುವತಿಯರು ಸಂತ ಮರಿಯಾ ನೊವೆಲ್ಲಾ ಚರ್ಚಿನ ಬಳಿ ಪ್ರಾರ್ಥನೆಗೆಂದು ಬಂದವರು ಆಕಸ್ಮಿಕವಾಗಿ ಭೇಟಿಯಾಗುತ್ತಾರೆ. ಆ ಯುವತಿಯರು ಹದಿನೆಂಟರಿಂದ ಇಪ್ಪತ್ತೆಂಟರ ವಯಸ್ಸಿನವರು. ವಿದ್ಯಾವಂತರೂ, ಸುಸಂಸ್ಕøತರೂ, ಸುಂದರಿಯರೂ ಆಗಿದ್ದು ಉತ್ತಮ ಮನೆತನದಿಂದ ಬಂದವರಾಗಿರುತ್ತಾರೆ. ಅವರ ಹೆಸರುಗಳು ಪಾಂಪಿನಿಯಾ, ಫಿಯಮೆಟ್ಟಾ, ಫಿಲೋಮೆನ, ಎಮಿಲಿಯ, ಲಾರೆಟ್ಟ, ನೆಫಿಲೆ ಮತ್ತು ಎಲಿಸಾ. ಅವರೆಲ್ಲಾ ಪ್ಲೇಗ್‍ನಿಂದಾದ ಸಾವು ನೋವಿನ ವಿಷಯ ಮಾತನಾಡುತ್ತಾ ಇರುವಾಗ ಹಿರಿಯವಳಾದ ಪಾಂಪಿನಿಯ ಹೇಳುತ್ತಾಳೆ, ‘ಈ ನಗರದಲ್ಲಿ ನಾವೆಲ್ಲಾ ಏನೂ ಕಾರಣವಿಲ್ಲದೆ ಇದ್ದೇವೆ. ದಿನನಿತ್ಯ ಸಾವು-ನೋವು, ನರಳಾಟ ಕಾಣುತ್ತಿದ್ದೇವೆ, ಪಾದ್ರಿಯ ಒಂದೇ ಪ್ರಾರ್ಥನೆಯ ಯಾಂತ್ರಿಕ ವದರಾಟ ಕೇಳುತ್ತಿದ್ದೇವೆ. ಅವರಿವರಿಂದ ನಮಗೆ ಸಿಗುವ ಸುದ್ದಿಯೂ ಸಾವಿನ ಸುದ್ದಿಯೇ ಆಗಿರುತ್ತದೆ. ಎಲ್ಲಿ ಹೋದರೂ, ಎಲ್ಲಿ ನೋಡಿದರೂ ಸತ್ತವರ ಪ್ರೇತಾತ್ಮಗಳೇ ಕಂಡಂತೆ ಭಾಸವಾಗುತ್ತದೆ. ಹಾಗಿರುವಾಗ ಈ ಸ್ಮಶಾನ ನಗರದಲ್ಲಿ ನಾವೇಕೆ ಇರಬೇಕು. ನಮ್ಮ ಆತ್ಮಗಳೂ ಸಹ ನಮ್ಮ ದೇಹಕ್ಕೆ ಬೇರೆಯವರಿಗಿಂತ ಬಲವಾಗೇನೂ ಅಂಟಿಕೊಂಡಿಲ್ಲ. ನಮ್ಮಂಥ ಯುವಕ ಯುವತಿಯರೂ ಸತ್ತಿರುವುದನ್ನು ಕಂಡಿದ್ದೇವೆ. ಹಾಗಿರುವಾಗ ನಮಗೆ ಶಕ್ತಿ ಇರುವಾಗಲೇ ಈ ಊರು ಬಿಟ್ಟು ದೂರ ಹೋಗೋಣ; ಸಾಧ್ಯವಿರುವಾಗಲೇ ತಪ್ಪಿಸಿಕೊಳ್ಳೋಣ. ಪಕ್ಷಿಗಳ ಕಲರವ ಕೇಳುವಲ್ಲಿಗೆ, ಸುಂದರ ಹಸಿರು ಬೆಟ್ಟ, ಕಣಿವೆ ಕಾಣುವಲ್ಲಿಗೆ, ಸಮುದ್ರದ ಅಲೆಗಳ ಹಾಗೆ ಓಲಾಡುವ ಗೋಧಿ ಹೊಲಗಳು ಇರುವೆಡೆಗೆ ಹೋಗೋಣ. ನಾವು ಎಲ್ಲರನ್ನೂ ಬಿಟ್ಟು ಹೋಗುತ್ತಿದ್ದೇವೆನ್ನುವ ಪಾಪ ಪ್ರಜ್ಞೆ ಬೇಡ. ಏಕೆಂದರೆ ನಾವು ಯಾರನ್ನೂ ಬಿಟ್ಟು ಹೋಗುತ್ತಿಲ್ಲ; ಒಂದು ರೀತಿಯಲ್ಲಿ ನಮ್ಮ ಸಂಬಂಧಿಕರೆಲ್ಲಾ ಸತ್ತು ನಮ್ಮನ್ನೇ ಬಿಟ್ಟು ಹೋಗಿದ್ದಾರೆ. ನಾವು ಇಲ್ಲೇ ಇದ್ದರಂತೂ ನಮಗೆ ಸಾವು ನಿಶ್ಚಿತ. ಆದ್ದರಿಂದ ದೂರದ ಹಳ್ಳಿಗಳಿಗೆ ನಮ್ಮ ಆಳುಕಾಳುಗಳೊಂದಿಗೆ ಹೋಗೋಣ. ಸಾಧ್ಯವಿರುವಷ್ಟು ದಿನ ಸುಖ ಸಂತೋಷದಿಂದ ಬದುಕೋಣ.
                ಪಾಂಪಿನಿಯಾಳ ಸಲಹೆಯನ್ನು ಎಲ್ಲರೂ ಒಪ್ಪುತ್ತಾರೆ ಹಾಗೂ ಕೂಡಲೇ ಹೊರಡೋಣವೆಂದು ಹೇಳುತ್ತಾರೆ. ಆಗ, ‘ಬರೇ ಹೆಂಗಸರೇ ಹೊರಡುವುದು ಕಷ್ಟ.. ನಿಮಗೇ ಗೊತ್ತು ಗಂಡಸೊಬ್ಬನಿಲ್ಲದಿದ್ದಲ್ಲಿ ಹೆಂಗಸರು ಹೇಗೆ ವರ್ತಿಸುತ್ತಾರೆಂಬುದು! ನಾವೆಲ್ಲಾ ಮೊದಲೇ ಪುಕ್ಕಲು ಸ್ವಭಾವದವರು. ಯಾರಾದರು ಗಂಡಸರನ್ನೂ ಕರೆದೊಯ್ಯೋಣಎನ್ನುತ್ತಾಳೆ ಫಿಲೋಮೆನಾ. ಆಗ ಅಲ್ಲಿಗೆ ಪಾಂಫಿಲೊ, ಫಿಲೋಸ್ಟ್ರಾಟೊ ಹಾಗೂ ಡಿಯೋನಿಯೋ ಎಂಬ ಮೂವರು ಸ್ಫುರದ್ರೂಪಿ ಯುವಕರು ಬರುತ್ತಾರೆ. ಅವರು ಆ ಯುವತಿಯರಿಗೆ ಪರಿಚಯವಿದ್ದವರೆ. ಪಾಂಪಿನಿಯಾ, ‘ಅದೃಷ್ಟವೇ ಅವರನ್ನು ಅಲ್ಲಿಗೆ ಕರೆತಂದಿದೆಎಂದು ಹೇಳುತ್ತಾ, ಅವರಿಗೆ ಅದುವರೆಗೆ ನಡೆದ ಮಾತುಕತೆಯೆಲ್ಲಾ ತಿಳಿಸಿ ಅವರ ಜೊತೆ ಬರುವಂತೆ ಕೇಳುತ್ತಾಳೆ. ಆ ಯುವಕರೂ ಸಂತೋಷದಿಂದ ಹೊರಡಲು ತಯಾರಾಗುತ್ತಾರೆ.
                ಎಲ್ಲರೂ ಮರುದಿನ ಮುಂಜಾನೆಯೇ ತಮಗೆ ಬೇಕಾದ ಸಾಮಾನು ಸರಂಜಾಮುಗಳನ್ನು ಹೊತ್ತು ಆಳುಕಾಳುಗಳೊಂದಿಗೆ ಹೊರಟು ಊರ ಹೊರಗಿನ ತೋಟದ ಮನೆಯೊಂದಕ್ಕೆ ಹೋಗುತ್ತಾರೆ. ಆ ಹತ್ತು ಜನಗಳ ಗುಂಪಿನಲ್ಲಿ ದಿನಕ್ಕೊಬ್ಬರು ನಾಯಕರಾಗಬೇಕೆಂದೂ, ಆ ದಿನ ಎಲ್ಲರೂ ಅವರು ಹೇಳಿದಂತೆ ಕೇಳಬೇಕೆಂದು ತೀರ್ಮಾನಿಸುತ್ತಾರೆ.
                ಆ ಮನೆಯಲ್ಲಿ ಎಲ್ಲರೂ ಹರುಷೋಲ್ಲಾಸದಿಂದ ರುಚಿಯಾದ ವೈನ್ ಕುಡಿದು, ಒಳ್ಳೆಯ ಆಹಾರ ಸೇವಿಸಿ, ಹೊರಗಿನ ತೋಟದಲ್ಲಿ ಓಡಾಡಿ, ಹಾಡು, ಸಂಗೀತದೊಂದಿಗೆ ಹೊರಗಿನ ಸಾವಿನ ಪ್ರಪಂಚ ಮರೆತು ಕಾಲ ಕಳೆಯುತ್ತಾರೆ.
                ಮೊದಲನೆಯ ದಿನ ಆ ಗುಂಪಿಗೆ ನಾಯಕಿಯದ ಪಾಂಪಿನಿಯಾ ಕಾಲ ಕಳೆಯಲು ದಿನಕ್ಕೊಬ್ಬಬ್ಬರು ಒಂದೊಂದು ಕತೆ ಹೇಳಬೇಕೆಂದು ತಿಳಿಸುತ್ತಾರೆ. ಎಲ್ಲರೂ ಆ ಸಲಹೆಯನ್ನು ಅನುಮೋದಿಸಿ ಕತೆಗಳನ್ನು ಕೇಳಲು ಉತ್ಸುಕರಾಗುತ್ತಾರೆ.

https://archive.org/details/boccaccionarasikategalu

Tuesday, March 25, 2014

The Odour- A short Story

The Odour

By the time Rajesh reached BMTC Bus stand it was already late. The crowd was getting bigger and bigger. He cursed his boss. He wanted to smoke, but was hesitant. Last time a police man had warned him. His body was wet with sweat. This year the summer has been unusual in many aspects. It had reached Bangalore rather early. The hot and humid weather was draining his sap. Many buses came and went, but there was no sign of his bus. Whenever a bus arrived the people were swarming its two entrances like bees. It was a struggle for people who wanted to get down. He could hear them cursing.

He stretched his neck to look at the number of the bus. He has been travelling in this route for the past 25 years. His bus number has been changed, but now it has appendages like A, B and C. He looked at his watch, it was already half past eight. His wife had already called twice.

Finally his bus arrived, people from everywhere started running towards it. Before he could know, he was already inside the bus. He felt bad as he could not get a seat. He thought people were always faster than him. He badly needed a seat as he was damn tired. He wanted to sit down and relax his paining neck and may be he also wanted to think about Saroja, his colleague. She too had stayed back today late at the Office with him, assisting him in preparing the reports. He leaned against a supporting rod in the bus and closed his eyes. People were pushing all around.

He closed his eyes and tried to push in the thoughts of Saroja. He had a minimum of forty five minutes of bus journey ahead. ‘Saroja has a strange smell’, Rajesh thought. He was surprised at pleasant smell oozing out from her even in this hot summer. Today evening she had come many a times near him. Whenever she came near him, his nostrils used to open wide and his breath used to get deeper and deeper. He wanted to ask what perfume she uses, or was it the fragrance of her sweat? ‘Whatever it is, it has a soothing effect’, he thought. Bus Conductor was shouting to accommodate more people. Somebody pushed Rajesh and he did not budge nor he opened his eyes.

Somebody pressed against him and a strong pungent smell entered his nostrils. Suddenly Saroja escaped from his thoughts and Rajesh opened his eyes. His breath choked as a pungent, stinking smell enveloped him. In front a teenaged boy was standing and he was being pushed by others. Rajesh wanted to get back away from that boy, but he could not even lift his leg. The bus was so overcrowded. Rajesh could not tolerate the smell. Twitching his face he looked at the boy. The boy wore a sheepish smile. His clothes were dirty or rather they were like starched clothes- hardened by the dirt and sweat. It seemed the boy had never taken a bath in his life time. His eyes though innocent had secretions collected at the edges which too was hardened. Rajesh’s stomach churned. He closed his eyes and leaned back as if to get away from that boy. He could not. He tried to hold his breath to stop that pungent stinking odour entering his lungs. But his efforts were in vain. He could not stop the stinking smell emanating from the boy entering his lungs. He started grumbling, he felt very uneasy. He had never experienced such a repulsive smell in his life. He wanted to get down from the bus and he tried to jostle through. He could not move an inch. People were still trying to get in and were shouting. He was so helpless and miserable. Rajesh looked at the boy again. The boy was looking out of the window at a film poster. It seemed as if his hair has not seen oil or a comb. He saw the boy scratching his head and his eyes unknowingly saw the nails of the boy. Rajesh was shocked. Half an inch long nails had all the dirt on this earth. Rajesh felt dizzy and he closed his eyes. The churning in the somach had not stopped. Rajesh stiffened his body and closed his eyes. He felt the smell entering his veins from the lungs. He felt the smell entering his body cells. He felt he himself is stinking and unknowingly shuddered. The bus had moved and was already nearing Corporation. Some people tried to get down and Rajesh pushed aside that boy and rushed to the door to get down. He heard people scolding him.

He sat down on a bench under the bus shelter. It was dark and there were very few people around. He felt the same odour around him. He tried to close his nostrils and suddenly he took back his hand as he felt his hand was foul smelling. He remembered he had pushed that boy aside with the same hand. The churning in the stomach was unbearable and his body started to sweat. He got up and went near the fence of the Corporation building and he felt as if his guts were violently strained and he could bear it no longer, he vomitted. It was sudden and so powerful vomit made its way through his nostrils also. He took out his water bottle from his bag and found that it was empty. He desperately wanted to clean his mouth. He felt as if that boy in the bus is still hugging him. He felt as if the stinking odour of the boy has enveloped his body. He could feel that smell in his nostrils and now in his mouth also. Rajesh felt dizzy and thought he will not be able to catch another bus for his travel. He hired an auto. He has been travelling in these buses for so many years. He never had a smelly experience like this before.

Auto driver was humming a song. Suddenly he stopping humming turned back and had a quick glance at Rajesh. Rajesh felt uneasy. He wanted to reach home early and wanted to clean himself and wanted to clean the smell of that boy which was still clinging to him. Auto driver rubbed his nose looked at both sides of the road and said ‘Dirty smell!’ Rajesh moved to a corner of the seat. He felt the driver must have found out the source of the bad odour. Was it coming from his mouth? Or from his body? Rajesh pursed his lips tight and slowed his breathing as if to keep it away from the Auto driver. He got down near his house and paid the money. Auto driver took the money in his finger tips and hurriedly left the place rubbing his nose.

There was no one at the home. His son Kirti must have gone for tutions and his wife must be in neighbour’s house. He opened the door with his keys, threw the bag on the sofa and rushed to the bath room.

He never had such a refreshing bath in his life or he thought so. But the strange and stinking smell of that boy was still in his nostrils. He blew his nose, used abundant after shave, but it was still hovering around Rajesh. He sat down and switched on the TV. He wanted to forget everything. The door bell rang.

Rajesh’s wife Anjana came inside with a vegetable bag. She had gone to neighbourhood vegetable shop. She kept her shopping bag on the dining table and apologised for returning late from the shop. She looked at Rajesh and asked him,

‘Are not you feeling well? Whats the matter with you? Why you look so dull?’

Rajesh was hesitant to tell about the stinking smelly boy and his gut churning experience on the way. ‘Oh, nothing’ he said, ‘I am just tired’.

Rajesh indeed was tired. After dinner he sat in front of the TV. The image of the dirty boy with his long dirt filled nails and huge hardened secretions in the eyes came to his mind. That peculiar, unexplainable stinking odour started to fill his nostrils. Again his guts started to churn. He pulled back his head and closed his eyes. He wanted to forget everything. He forcibly tried to rope in some pleasant thoughts in to his mind. His wife came to sat next to him. She too was watching TV. After some time she rubbed her nose and complained of the smell from the gutter. She got up and closed the windows. Rajesh felt uneasy. Is it the smell of the gutter or the odour from his body? He felt feverish. He did not go to bedroom to sleep because he was afraid that she would find out the source of the smell. He lied down on the sofa.

It was a strange dream. All these years his dreams were only images. But today his dreams consisted of odours. He saw an image approaching him. He was the same boy, the boy who was adjacent to him in the bus, the boy with the stinking odour. Rajesh wanted to turn away and close his eyes. But he could not move. That boy came nearer and nearer. He could see his dirty mangled hair, face with tar like dirt, thick swollen lips and saliva dripping from it. Suddenly the stinking odour engulfed him. Rajesh wanted to shout, but no voice came out from his throat. That boy came still nearer put his hand on the shoulder of Rajesh. As if out of a jolt Rajesh woke up. He was sweating profusely. He saw his son Kirti standing in front of him with his hand on the shoulder. Kirti rubbed his nose and murmured something about the smell. Kirti called his mother. Rajesh had high fever. He was given a crocin. He told his wife he will sleep on the sofa itself as it is much comfortable. The whole night Rajesh did not sleep a wink. Whenever he tried to sleep, he would get those stinking dreams.

Next morning he could not get up as he felt weak. His wife advised him to apply leave for a week and take rest for which he obediently obliged. He was no mood to travel in those buses.

One week passed like a flash. During the leave period he completed many of the house hold chores and minor repairs. He almost forgot the boy with the stinking odour. Next Monday he left to his office as usual. He caught his usual bus. There were many vacant seats. He was in a cheerful mood. As bus moved by, the crowd in the bus increased. There were many people standing and he was surprised to find that seat adjacent to him was vacant. No body sat next to him. The people who were standing were looking at Rajesh with twitched faces and they were rubbing their noses. He saw as if in a dream people moving away from him.

Dr.J.Balakrishna

E-Mail: j.balakrishna@gmail.com

Tuesday, August 13, 2013

Doctor who passed his exam by copying!!

My cartoon published in `Sudha' Weekly dated 25/7/2013


Friday, July 05, 2013

Being a Lifelong Bookworm May Keep You Sharp in Old Age | Surprising Science

Being a Lifelong Bookworm May Keep You Sharp in Old Age | Surprising Science
To keep their bodies running at peak performance, people often hit the gym, pounding away at the treadmill to strengthen muscles and build endurance. This dedication has enormous benefitsbeing in shape now means warding off a host of diseases when you get older. But does the brain work in the same way? That is, can doing mental exercises help your mind stay just as sharp in old age?
Experts say it’s possible. As a corollary to working out, people have begun joining brain gyms to flex their mental muscles. For a monthly fee of around $15, websites like Lumosity.com and MyBrainTrainer.com promise to enhance memory, attention and other mental processes through a series of games and brain teasers. Such ready-made mind exercises are an alluring route for people who worry about their ticking clock. But there’s no need to slap down the money right away—new research suggests the secret to preserving mental agility may lie in simply cracking open a book.
The findings, published online today in Neurology, suggest that reading books, writing and engaging in other similar brain-stimulating activities slows down cognitive decline in old age, independent of common age-related neurodegenerative diseases. In particular, people who participated in mentally stimulating activities over their lifetimes, both in young, middle and old age, had a slower rate of decline in memory and other mental capacities than those who did not.
Researchers used an array of tests to measure 294 people’s memory and thinking every year for six years years. Participants also answered a questionnaire about their reading and writing habits, from childhood to adulthood to advanced age. Following the participants’ deaths at an average age of 89, researchers examined their brains for evidence of the physical signs of dementia, such as lesions, plaques and tangles. Such brain abnormalities are most common in older people, causing them to experience memory lapses. They proliferate in the brains of people with Alzheimer’s disease, leading to memory and thinking impairments that can severely affect victims’ daily lives.
Using information from the questionnaire and autopsy results, the researchers found that any reading and writing is better than none at all. Remaining a bookworm into old age reduced the rate of memory decline by 32 percent compared to engaging in average mental activity. Those who didn’t read or write often later in life did even worse: their memory decline was 48 percent faster than people who spent an average amount of time on these activities.
The researchers found that mental activity accounted for nearly 15 percent of the difference in memory decline, beyond what could be explained by the presence of plaque buildup. “Based on this, we shouldn’t underestimate the effects of everyday activities, such as reading and writing, on our children, ourselves and our parents or grandparents,” says study author Robert S. Wilson, a neuropsychologist at the Rush University Medical Center in Chicago, in a statement.
Reading gives our brains a workout because comprehending text requires more mental energy than, for example, processing an image on a television screen. Reading exercises our working memory, which actively processes and stores new information as it comes. Eventually, that information gets transferred into long-term memory, where our understanding of any given material deepens. Writing can be likened to practice: the more we rehearse the perfect squat, the better our form becomes, tightening all the right muscles. Writing helps us consolidate new information for the times we may need to recall it, which boosts our memory skills.
So the key to keeping our brains sharp for the long haul does have something in common with physical exercise: we have to stick with it. And it’s best to start early. In 2009, a seven-year study of 2,000 healthy individuals aged 18 to 60 found that mental agility peaks at 22. By 27, mental processes like reasoning, spatial visualization and speed of thought began to decline.


Read more: http://blogs.smithsonianmag.com/science/2013/07/being-a-lifelong-bookworm-may-keep-you-sharp-in-old-age/#ixzz2Y9pbxZfQ 
Follow us: @SmithsonianMag on Twitter